ಗರ್ಭಧಾರಣೆಯಿಂದ ಹೆರಿಗೆಯಾಗುವವರೆಗೆ ಪ್ರತಿಯೊಂದು ಹಂತದಲ್ಲೂ ನಿರಂತರವಾಗಿ ಮಗು ಬೆಳೆಯುತ್ತಲೇ ಇರುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಮಗು ಹಾಗೂ ತಾಯಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಗುವು ಬ್ಲಾಸ್ಟೊಸಿಸ್ಟ್‌ನಿಂದ ಭ್ರೂಣದ ವರೆಗೆ ತಾಯಿಯ ಗರ್ಭಾಶಯದಲ್ಲಿ ವಿವಿಧ ಬೆಳವಣಿಗೆಯ ಹಂತಗಳನ್ನು ಹಾದುಹೋಗುತ್ತದೆ. ಹನ್ನೆರಡನೇ ವಾರಕ್ಕೆ ಭ್ರೂಣವು ಎಷ್ಟರ ಮಟ್ಟಿಗೆ ಬೆಳವಣಿಗೆಯಾಗಿರುತ್ತದೆ ಎನ್ನುವುದನ್ನು ತಿಳಿಯೋಣ.